ಎಸ್‌ಎಸ್‌ಎಸ್‌ಸಿ ನಂತರ ಮುಂದೇನು..?
10th ನಂತರ ಯಾವ ಕೋರ್ಸ್ ಆಯ್ಕೆ ಮಾಡಿದರೆ ಉತ್ತಮ..?
ಎಸ್‌ಎಸ್‌ಎಸ್‌ಸಿ ನಂತರ ಕೋರ್ಸ್‌ಗಳನ್ನು ಆಯ್ಕೆ ಮಾಡುವುದು ಹೇಗೆ..?
SSLC ಯಲ್ಲಿ 85. 63 ಮಕ್ಕಳು ಉತ್ತೀರ್ಣರಾಗಿದ್ದು, ವಿದ್ಯಾರ್ಥಿಗಳ ಭವಿಷ್ಯ ಮುಂದೇನು ಎಂಬ ಗೊಂದಲ ನಿಮ್ಮ ಮುಂದಿದೆ.ಇನ್ನೂ ಈ ಬಗೆಗೆ ಪೋಷಕರಲ್ಲಿ ಹೆಚ್ಚಿನ ಆತಂಕ ಮನೆ ಮಾಡಿರುತ್ತದೆ. ಇನ್ನು ವಿದ್ಯಾರ್ಥಿಗಳು ಈ ಘಟ್ಟದಲ್ಲಿ ಆಯ್ಕೆ ಮಾಡಿಕೊಳ್ಳುವ ಕೋರ್ಸ್ ಅವರ ಕೆರಿಯರ್ ಲೈಫ್ ಅನ್ನು ನಿರ್ಧರಿಸುವಂತದ್ದಾಗಿರುತ್ತದೆ.
ವಿದ್ಯಾರ್ಥಿಗಳಿಗೆ ಫಲಿತಾಂಶ ಬಂದಿರುವ ಖುಷಿ ಒಂದೆಡೆಯಾದರೆ ಇನ್ನೊಂದೆಡೆ ಮುಂದೇನು ಎಂಬ ಪ್ರಶ್ನೆಯೂ ಕೂಡಾ ಅವರಲ್ಲಿ ಇರುತ್ತದೆ. ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಮುಂದೆ ಯಾವೆಲ್ಲಾ ಕೋರ್ಸ ಮಾಡಬಹುದು ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿರುತ್ತದೆ
ವಿಜ್ಞಾನ ವಿಭಾಗ:
10ನೇ ತರಗತಿ ನಂತರ ಆಯ್ಕೆ ಮಾಡಬಹುದಾದ ಹಾಗೂ ಉತ್ತಮ ಅವಕಾಶ ಉಳ್ಳ ಕೋರ್ಸ್ ಇದಾಗಿರುತ್ತದೆ . ಏಕೆಂದರೆ ಪಿಯುಸಿ ಮುಗಿದ ನಂತರ ಪದವಿ ಹಂತದಲ್ಲಿ ನೀವು ಕಲಾ ಅಥವಾ ಕಾಮರ್ಸ್ ವಿಭಾಗಕ್ಕೆ ಹೋಗಬಹುದು. ಆದ್ರೆ ಪಿಯುಸಿಯಲ್ಲಿ ಕಲಾ ಮತ್ತು ಕಾಮರ್ಸ್ ಮಾಡಿದ ವಿದ್ಯಾರ್ಥಿಗಳಿಗೆ ಈ ಅವಕಾಶ ಇರುವುದಿಲ್ಲ. ವಿಜ್ಞಾನ ಓದಿದ ವಿದ್ಯಾರ್ಥಿಗಳಿಗೆ ಬಹಳಷ್ಟು ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳಿವೆ. ಹಲವಾರು ಕಾಲೇಜುಗಳು ವಿಜ್ಞಾನ ವಿಭಾಗವನ್ನು ಹೊಂದಿದ್ದು, ವಿಜ್ಞಾನ ವಿಷಯದಲ್ಲಿ ಕೂಡ ಆಯ್ಕೆಗಳಿರುತ್ತವೆ ಅವುಗಳೆಂದರೆ ಭೌತಶಾಸ್ತ್ರ, ರಸಾಯನಶಾಸ್ತ್ರ,ಗಣಿತ ಮತ್ತು ಜೀವಶಾಸ್ತ್ರ (ಪಿಸಿಎಂಬಿ) , ಭೌತಶಾಸ್ತ್ರ, ರಸಾಯನಶಾಸ್ತ್ರ,ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ (ಪಿಸಿಎಂಸಿ) ,ಭೌತಶಾಸ್ತ್ರ, ರಸಾಯನಶಾಸ್ತ್ರ,ಗಣಿತ ಮತ್ತು ಇಲೆಕ್ಟ್ರಾನಿಕ್ಸ್ (ಪಿಸಿಎಂಇ) ಮತ್ತು ಕೆಲವು ಕಾಲೇಜುಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ,ಗಣಿತ ಮತ್ತು ಸ್ಟ್ಯಾಟಿಸ್ಟಿಕ್ಸ್ (ಪಿಸಿಎಂಎಸ್) . ಇಷ್ಟೂ ಆಯ್ಕೆಗಳಲ್ಲಿ ವಿದ್ಯಾರ್ಥಿಗಳು ಯಾವುದಾದರೂ ಒಂದನ್ನು ಆಯ್ಕೆಮಾಡಿಕೊಂಡು ಅಧ್ಯಯನ ಮಾಡಬಹುದು.
ವಾಣಿಜ್ಯ ವಿಭಾಗ:
ವಿದ್ಯಾರ್ಥಿಗಳು ಎಕಾನಾಮಿಕ್ಸ್ ಅಥವಾ ಅಕೌಂಟಿಂಗ್ ಕೋರ್ಸ್ ಮಾಡಬೇಕು ಎಂಬ ಆಸಕ್ತಿ ಹೊಂದಿದ್ದಲ್ಲಿ ನೀವು ಕಾಮರ್ಸ್ ವಿಷಯವನ್ನು ಆಯ್ಕೆ ಮಾಡುವುದು ಬೆಸ್ಟ್. ಈ ಕೋರ್ಸ್ ಅನ್ನು ನೀವು ಮಾಡಿದ್ದಲ್ಲಿ, ಹಣ ಹೂಡಿಕೆ, ಬ್ಯಾಂಕಿಂಗ್, ಫಿನಾನ್ಷಿಯಲ್ ಅಡ್ವೈಸರ್ ಮತ್ತು ಚಾರ್ಟೆಡ್ ಅಕೌಂಟಿಂಗ್ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ನಿಮ್ಮ ಕೆರಿಯರ್ ಅನ್ನು ರೂಪಿಸಿಕೊಳ್ಳಬಹುದು. ಇನ್ನು ಮ್ಯಾನೇಜ್‍ಮೆಂಟ್ ಕೋರ್ಸ್ ಮಾಡಬೇಕು ಎಂದು ಅಂದುಕೊಂಡಿರುವ ವಿದ್ಯಾರ್ಥಿಗಳು ಕಾಮರ್ಸ್ ವಿಷಯವನ್ನು ಆಯ್ಕೆ ಮಾಡಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.
ಕಲಾ ವಿಭಾಗ:
ವಿದ್ಯಾರ್ಥಿಗಳು ಭಾಷೆ ಮತ್ತು ಇತಿಹಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಲ್ಲಿ ಕಲಾ ವಿಭಾಗ ತುಂಬಾನೆ ಬೆಸ್ಟ್. ಕಲಾ ವಿಭಾಗದಲ್ಲಿ ನೀವು ಸ್ಟಡಿ ಮಾಡಿದ್ರೆ ನಿಮಗೆ ಉದ್ಯೋಗ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಸಮಾಜ ಸೇವೆ, ಪತ್ರಿಕೋದ್ಯಮ ಮತ್ತು ಅನೇಕ ಅಧಿಕಾರಿ ಹುದ್ದೆಗಳು ಹೀಗೆ ಮುಂತಾದ ಕ್ಷೇತ್ರಗಳಲ್ಲಿ ನಿಮ್ಮ ಕೆರಿಯರ್ ರೂಪಿಸಿಕೊಳ್ಳಬಹುದು.
ಡಿಪ್ಲೋಮಾ ಇನ್ ಇಂಜಿನಿಯರಿಂಗ್:
ವಿದ್ಯಾರ್ಥಿಗಳು ಇಂಜಿನಿಯರ್ ಆಗಬೇಕು ಎನ್ನುವ ಆಸೆಯನ್ನು ಹೊಂದಿದ್ದಲ್ಲಿ ಎಸ್‌ಎಸ್ಎಲ್‌ಸಿ ನಂತರ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಕೋರ್ಸ್ ಮಾಡಿ ನಿಮ್ಮ ಕೆರಿಯರ್ ಲೈಫ್ ರೂಪಿಸಿಕೊಳ್ಳಬಹುದು. ಎಸ್‍ಎಸ್‍ಎಲ್ ಸಿ ಬಳಿಕ ಡಿಪ್ಲೋಮಾ ಕೋರ್ಸ್ ಮಾಡುವ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಸರ್ಟಿಫಿಕೇಟ್ ಜೊತೆಗೆ ಇನ್ನೂ ಕೆಲವು ಅಗತ್ಯ ದಾಖಲೆಗಳನ್ನು ಹೊಂದಿರಬೇಕಿರುತ್ತದೆ.
ಇಂಜಿನಿಯರಿಂಗ್ ನಲ್ಲಿ ನೀಡುವ ಡಿಪ್ಲೋಮಾ ಕೋರ್ಸ್‌ಗಳ ವಿವರ:
ಇಂಜಿನಿಯರಿಂಗ್‌ನಲ್ಲಿ ನೀಡಲಾಗುವ ಡಿಪ್ಲೋಮ ಕೋರ್ಸ್‌ಗಳ ವಿವರ ಇಲ್ಲಿವೆ- ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ,ಡಿಪ್ಲೋಮಾ ಇನ್ ಇಲೆಕ್ಟ್ರಿಕಲ್ ಇಂಜಿನಿಯರಿಂಗ್, ಡಿಪ್ಲೋಮಾ ಇನ್ ಸಿವಿಲ್ ಇಂಜಿನಿಯರಿಂಗ್ ,ಡಿಪ್ಲೋಮಾ ಇನ್ ಕೆಮಿಕಲ್ ಇಂಜಿನಿಯರಿಂಗ್ .
ಇಂಜಿನಿಯರಿಂಗ್‌ನಲ್ಲಿ ಡಿಪ್ಲೋಮ ಮಾತ್ರವಲ್ಲದೇ ಇನ್ನೂ ಅನೇಕ ವಿಷಯಗಳಲ್ಲಿ ಡಿಪ್ಲೋಮಾ ಕೋರ್ಸ್‌ಗಳು ಇವೆ. ಆ ಕೋರ್ಸ್‌ಗಳು ಯಾವುವೆಂದರೆ.
ಡಿಪ್ಲೋಮಾ ಇನ್ ಫಾರ್ಮಸಿ
*ಡಿಪ್ಲೋಮಾ ಇನ್ ನರ್ಸಿಂಗ್ ಮತ್ತು ಮಿಡ್‍ವೈಫರಿ,
*ಡಿಪ್ಲೋಮಾ ಇನ್ ಇಂಟೀರಿಯರ್ ಡಿಸೈನಿಂಗ್
*ಡಿಪ್ಲೋಮಾ ಇನ್ ಟೂಲ್ ಆಂಡ್ ಡೈ ಮೇಕಿಂಗ್
*ಡಿಪ್ಲೋಮಾ ಇನ್ ಪ್ರಿಂಟಿಂಗ್ ಟೆಕ್ನಾಲಾಜಿ
*ಡಿಪ್ಲೋಮಾ ಇನ್ ಪ್ಲ್ಯಾಸ್ಟಿಕ್ ಟೆಕ್ನಾಲಾಜಿ
*ಡಿಪ್ಲೋಮಾ ಇನ್ ಲೆಧರ್ ಟೆಕ್ನಾಲಾಜಿ
*ಡಿಪ್ಲೋಮಾ ಇನ್ ಪೌಲ್ಟ್ರಿ
*ಡಿಪ್ಲೋಮಾ ಇನ್ ಮ್ಯೂಸಿಕ್
*ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬರೋಟರಿ ಟೆಕ್ನಾಲಾಜಿ
*ಡಿಪ್ಲೋಮಾ ಇನ್ ಫುಡ್ ಟೆಕ್ನಾಲಾಜಿ
*ಡಿಪ್ಲೋಮಾ ಇನ್ ಟೆಕ್ಸ್‌ಟೈಲ್ ಇಂಜಿನಿಯರಿಂಗ್
ಡಿಪ್ಲೋಮಾ ಮಾಡಿದ ವಿದ್ಯಾರ್ಥಿಗಳು ಬಿ.ಇ ಎರಡನೇ ವರ್ಷಕ್ಕೆ ಲ್ಯಾಟರಲ್ ಎಂಟ್ರಿಯನ್ನು ಪಡೆದುಕೊಳ್ಳಬಹುದು. ಬಿ.ಇ ಮುಗಿದ ನಂತರ ಬಿ.ಟೆಕ್ ಅನ್ನು ಮಾಡಬಹುದು.
ಐಟಿಐ ಕೋರ್ಸುಗಳು:
ವಿದ್ಯಾರ್ಥಿಗಳು ಎಸ್ಎಸ್‌ಎಲ್‌ಸಿ ನಂತರ ಇಂಡಸ್ಟ್ರಿಯಲ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಉದ್ಯೋಗ ಸಂಬಂಧಪಟ್ಟ ಕೋರ್ಸ್‌ಗಳನ್ನು ಮಾಡಬಹುದು. ಐಟಿಐ ಕೋರ್ಸ್ ವಿದ್ಯಾರ್ಥಿಗಳಲ್ಲಿನ ಸ್ಕಿಲ್ಡ್ ವರ್ಕ್ ಅನ್ನು ಹೊರತೆಗೆಯುವ ಪ್ರಯತ್ನ ಮಾಡುವುದು.
ಐಟಿಐ 1 ರಿಂದ 2 ವರ್ಷಗಳ ಕಾಲ ಅಧ್ಯಯವನ್ನು ಮಾಡುವ ಕೋರ್ಸ್‌ಗಳಾಗಿದ್ದು ಇಲ್ಲಿ ಕೆಲವು ವಿಭಾಗಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು ಅವುಗಳೆಂದರೆ
* ಐಟಿಐ ಇಲೆಕ್ಟ್ರೀಶಿಯನ್ ಕೋರ್ಸ್
* ಐಟಿಐ ಪ್ಲಂಬರ್ ಕೋರ್ಸ್
*ಐಟಿಐ ವೆಲ್ಡರ್ ಕೋರ್ಸ್
* ಐಟಿಐ ಟರ್ನರ್ ಕೋರ್ಸ್
* ಐಟಿಐ ಮೆಕ್ಯಾನಿಕ್ ಕೋರ್ಸ್
*ಐಟಿಐ ಮೆಕ್ಯಾನಿಸ್ಟ್ ಕೋರ್ಸ್
ಜಾಬ್ ಓರಿಯೆಂಟೆಡ್ ಕೋರ್ಸ್:
ಐಟಿಐ ಮತ್ತು ಪಾಲಿಟೆಕ್ನಿಕ್ ಕಾಲೇಜುಗಳನ್ನು ಹೊರತುಪಡಿಸಿ ಇನ್ನಿತರೆ ಕಾಲೇಜುಗಳು ಜಾಬ್ ಓರಿಯೆಂಟೆಡ್ ಕೋರ್ಸ್‌ಗಳನ್ನು ನೀಡುತ್ತಿವೆ ಅವುಗಳೆಂದರೆ
* ಡಿಪ್ಲೋಮಾ ಇನ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್
* ಪ್ಯಾರಾಮೆಡಿಕಲ್ ಕೋರ್ಸ್‌ಗಳು
ಸರ್ಟಿಫಿಕೇಟ್ ಕೋರ್ಸ್‌ಗಳು:
ಮೇಲೆ ತಿಳಿಸಿರುವ ಎಲ್ಲಾ ಕೋರ್ಸ್‌ಗಳನ್ನು ಹೊರತುಪಡಿಸಿ ಎಸ್‌ಎಸ್‌ಎಲ್‌ಸಿ ಮುಗಿಸಿದ ವಿದ್ಯಾರ್ಥಿಗಳು ಕೆಲವು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಬಹದು ಅವುಗಳೆಂದರೆ
* ಸರ್ಟಿಫಿಕೇಟ್ ಇನ್ ವೆಬ್ ಡಿಸೈನಿಂಗ್
* ಸರ್ಟಿಫಿಕೇಟ್ ಇನ್ ಎಥಿಕಲ್ ಹ್ಯಾಕಿಂಗ್
*ಸರ್ಟಿಫಿಕೇಟ್ ಇನ್ ಗ್ರಾಫಿಕ್ ಡಿಸೈನ್
* ಸರ್ಟಿಫಿಕೇಟ್ ಇನ್ ಆಪ್ ಡೆವಲಪ್ಮೆಂಟ್
ಹೀಗೆ ಎಸ್‌ಎಸ್‌ಎಲ್‌ಸಿ ಮುಗಿದ ಬಳಿಕ ಹಲವಾರು ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಮಾಡಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಇಷ್ಟದ ವಿಷಯವನ್ನು ಆಯ್ಕೆ ಮಾಡಿಕೊಂಡು ನಂತರ ಎಲ್ಲಿ ಈ ಕೋರ್ಸ್‌ಗಳು ಲಭ್ಯವಿವೆ ಮತ್ತು ಯಾವ ಕಾಲೇಜುಗಳು ಈ ಕೋರ್ಸ್‌ಗಳಿಗೆ ಎಷ್ಟು ಶುಲ್ಕವನ್ನು ವಿಧಿಸಿದೆ ಎನ್ನುವುದನ್ನು ಅಂತರ್ಜಾಲದಲ್ಲಿ ವೀಕ್ಷಿಸಬಹುದು.
No comments:
Post a Comment